Your message has been sent, you will be contacted soon

Call Me Now!

Close
Achievements of Karnataka Government Continues..!!!!
Death Anniversary of Smt. Indira Gandhi
Death Anniversary of Smt. Indira Gandhi

CM Siddaramaiah addressing Press Conference at KPCC HQ on the occasion of the Death Anniversary of Smt. Indira Gandhi

Like Us on Facebook

ಇಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರು ರಾಯದುರ್ಗ ರೈಲ್ವೇ ಮಾರ್ಗದಲ್ಲಿ ಬರುವ ಕೊರಟಗೆರೆ ರೈಲು ನಿಲ್ದಾಣದ ಕಾಮಗಾರಿಗಯನ್ನು ಪರಿಶೀಲಿಸಿದರು. ಈ ವೇಳೆ ಮುದ್ದಹನುಮೇಗೌಡ ಅವರೂ ಸಹ ಉಪಸ್ಥಿತರಿದ್ದರು. ... See MoreSee Less

View on Facebook

ಮೆಕ್ಕೆ ಜೋಳ, ಶೇಂಗಾ ಬೆಲೆ ತೀವ್ರ ಕುಸಿತ
ಕೇಂದ್ರದ ನೆರವು ಕೋರಿದ ರಾಜ್ಯ ಸರ್ಕಾರ

ಈ ಬಾರಿ ರಾಜ್ಯ ಸರ್ಕಾರದ ಪ್ರೋತ್ಸಾಹ ಮತ್ತು ಉತ್ತಮ ಮಳೆಯಿಂದಾಗಿ ಶೇಂಗಾ ಮತ್ತು ಮೆಕ್ಕೆ ಜೋಳ ಉತ್ಪಾದನೆ ಅತ್ಯುತ್ತಮವಾಗಿದೆ. ಅಧಿಕ ಬೆಳೆಯಾಗಿದ್ದರೂ ರೈತರಿಗೆ ಉತ್ತಮ ಬೆಲೆ ದೊರೆತಿಲ್ಲದೆ ಕಂಗಾಲಾಗಿದ್ದಾರೆ.

ಅನ್ನದಾತರ ಸಂಕಷ್ಟ ಅರಿತ ಸಚಿವ ಯು.ಟಿ. ಖಾದರ್ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡರು ಕೇಂದ್ರಕ್ಕೆ ಮನವಿ ಸಲ್ಲಿಸಿ ರಾಜ್ಯದ ರೈತರಿಗೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ.

ಪ್ರತಿ ಕ್ವಿಂಟಾಲ್ ಶೇಂಗಾಗೆ ಕೇಂದ್ರ ಸರ್ಕಾರ ರೂ. 4,450 ನಿಗದಿ ಪಡಿಸಿದೆ. ಆದರೆ, ಈಗಾಗಲೇ ಮಾರುಕಟ್ಟೆಯಲ್ಲಿ ರೂ. 3,500-4,000ಗಳವರೆಗೆ ಧಾರಣೆ ಇದೆ. ಅದೇ ರೀತಿ ಮೆಕ್ಕೆ ಜೋಳ ಬೆಲೆ ರೂ. 1,200 ಇದ್ದು ಕೇಂದ್ರ ಸರ್ಕಾರ ರೂ. 1,425 ನಿಗದಿ ಪಡಿಸಿದೆ. ಹೀಗಾಗಿ ರೈತರಿಗೆ ಹೆಚ್ಚಿನ ಬೆಲೆ ದೊರೆಯದೆ ಕಂಗಾಲಾಗಿದ್ದಾರೆ.

ಬೆಂಬಲ ಬೆಲೆ ಹೆಚ್ಚಿಸುವುದೂ ಸೇರಿದಂತೆ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹಾಗೂ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಸಂಪರ್ಕಿಸಿ ರಾಜ್ಯದ ರೈತರ ಪರವಾಗಿ ಕೋರಿಕೆ ಸಲ್ಲಿಸಿದ್ದಾರೆ.

ಕನಿಷ್ಠ ಬೆಂಬಲ ನೀಡಿ ಶೇಂಗಾ ಮತ್ತು ಮೆಕ್ಕೆ ಜೋಳವನ್ನು ಖರೀದಿಸವಂತೆ ರಾಜ್ಯ ಸರ್ಕಾರ ಇಟ್ಟ ಮನವಿಗೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೂಕ್ತವಾಗಿ ಸ್ಪಂದಿಸಿದ್ದು ,ರಾಜ್ಯದ ರೈತರಿಗೆ ಶುಭವಾರ್ತೆ ಸದ್ಯದಲ್ಲಿಯೇ ಲಭ್ಯವಾಗಲಿದೆ.
... See MoreSee Less

View on Facebook

Indian National Congress - Karnataka shared Indian National Congress's Rahul Gandhi on the Rafale Deal. ... See MoreSee Less

Here's Congress VP Rahul Gandhi's thoughts on the big question mark that is the Rafale Deal.

View on Facebook

ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಭೇಟಿ ಮಾಡಿತು. ... See MoreSee Less

View on Facebook

ಬೆಳಗಾವಿ ಪಾಲಿಕೆ ಸದಸ್ಯರಿಗೆ ಮೂಗು ದಾರ: ಆರ್. ರೋಷನ್ ಬೇಗ್
‘ಗಡಿ ಭಾಗದಲ್ಲಿ ಗಡಿ ಹಾಗೂ ಭಾಷಾ ವಿವಾದವನ್ನು ತನ್ನ ಬಂಡವಾಳ ಮಾಡಿಕೊಂಡಿರುವ
ನಾಡದ್ರೋಹಿ ಎಂಇಎಸ್ ನಾಯಕರು ಕನ್ನಡ – ಮರಾಠಿ ಉಭಯ ಭಾಷಿಕರ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಇಂತಹ ರಾಜ್ಯ ದ್ರೋಹಿಗಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ಸರ್ಕಾರ ತೀರ್ಮಾನಿಸಿದ್ದು ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿಯೇ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳಲಾಗುವುದು’
- ರೋಷನ್ ಬೇಗ್, ನಗರಾಭಿವೃದ್ಧಿ ಸಚಿವರು
... See MoreSee Less

View on Facebook

*Watch* ಸಿಎಂ Siddaramaiah ವಿಶೇಷ ಸಂದರ್ಶನ to TheState.News ಸಂಪಾದಕರಾದ ಸುಗತ ಶ್ರೀನಿವಾಸರಾಜು

Exclusive interview with Chief Minister of Karnataka, Siddaramaiah. Credits to The State News for the video
Sugata Srinivasaraju
... See MoreSee Less

View on Facebook

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ನೇರ ಸಂದರ್ಶನವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪೇಜ್‍ನಲ್ಲಿ ಸಂಜೆ 4.00 ಗಂಟೆಗೆ ವೀಕ್ಷಿಸಿ ... See MoreSee Less

View on Facebook

CM Speech Sahakara Ratna Award at Belagavi ... See MoreSee Less

View on Facebook

ಕುಡಿಯುವ ನೀರಿಗೂ ಕಾಸು ಕೊಡದ ಕೇಂದ್ರ!
ರಾಜ್ಯದ ಎಲ್ಲಾ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು 52 ಸಾವಿರ ಕೋಟಿರೂ. ಅಗತ್ಯವಿದೆ. ಆದರೆ ಕೇಂದ್ರ ನಾವು ನಿರೀಕ್ಷಿಸಿದಷ್ಟು ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ತಕ್ಷಣ ರೂ. 1,050 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
ಹೆಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಖಾತೆ ಸಚಿವರು
... See MoreSee Less

View on Facebook

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ.

ಸಿಎಂ :
ಶಾಸಕರು ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪ್ರತಿಪಕ್ಷಗಳ ಟೀಕೆಗಳಿಗೆ ಸಮರ್ಥವಾಗಿ ಉತ್ತರ ಕೊಡಬೇಕು.

ಬೆಳಗಾವಿಯಲ್ಲಿ ಸರ್ಕಾರದ ಕೊನೆಯ ಅಧಿವೇಶನ. ಪ್ರೀತಿ ಪಕ್ಷಗಳಿಗೆ ಯಾವುದೇ ವಿಷಯ ಇಲ್ಲ. ರಾಜಕೀಯ ಕಾರಣಗಳಿಗಾಗಿ ಕೆಲ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ.

ಜಾರ್ಜ್ ಅವರ ವಿಷಯದಲ್ಲೂ ಪ್ರತಿಪಕ್ಷದವರು ರಾಜಕಾರಣ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.

ಹಳೆಯ ವಿಚಾರವನ್ನೇ ಬಿಜೆಪಿಯವರು ಕೆದಕುತ್ತಿದ್ದಾರೆ. ಶಾಸಕರು ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಯಾವುದೇ ವಿಷಯ ಇರಲಿ, ಪ್ರತಿಪಕ್ಷಗಳ ಟೀಕೆಗೆ ಎದಿರೇಟು ಕೊಡಬೇಕು.
... See MoreSee Less

View on Facebook

ಮೋದಿ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಬೃಹತ್ ಉದ್ದಿಮೆದಾರರಿಂದ ವಸೂಲಾಗದ ಸರ್ಕಾರಿ ಬ್ಯಾಂಕ್‍ಗಳ ಸಾಲದ ಪ್ರಮಾಣ *263.66%ಕ್ಕೆ* ಏರಿಕೆ

2015ರ ಮಾರ್ಚ್‍ನಲ್ಲಿ ವಸೂಲಾಗದ ಸಾಲ ರೂ. *2.78 ಲಕ್ಷ ಕೋಟಿ*

2017ರ ಜೂನ್‍ನಲ್ಲಿ ವಸೂಲಾಗದ ಸಾಲ ರೂ. *7.33 ಲಕ್ಷ ಕೋಟಿ*
... See MoreSee Less

View on Facebook

ಇಂದು ಕೆಪಿಸಿಸಿ ಕಛೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಹಾಗೂ ಬಿ.ಎಲ್.ಶಂಕರ್ ಅವರು ಹೂಗುಚ್ಛವನ್ನು ಅರ್ಪಿಸುವ ಮೂಲಕ ನೆಹರೂ ಅವರನ್ನು ಸ್ಮರಿಸಿದರು. ... See MoreSee Less

View on Facebook

ನಿಮಗೆ ಬುದ್ಧಿ ಬಂದಿಲ್ಲವೇ?

‘ಈಶ್ವರಪ್ಪನವರೇ, ಉಪಮುಖ್ಯಮಂತ್ರಿಯಾಗಿದ್ದುಕೊಂಡು 2013ರ ಚುನಾವಣೆಯಲ್ಲಿ 3ನೇ ಸ್ಥಾನಕ್ಕಿಳಿದು ಸೋತವರು ನೀವು, 110 ಸ್ಥಾನದಿಂದ 40ಸ್ಥಾನಕ್ಕಿಳಿದು ಮನೆ ಸೇರಿದ್ದೀರಿ. ನಿಮಗೆ ಬುದ್ಧಿ ಬಂದಿಲ್ಲವೇ?”
-ಸಿಎಂ ಸಿದ್ದರಾಮಯ್ಯ
... See MoreSee Less

View on Facebook

ದೇಶದ ಪ್ರಥಮ ಪ್ರಧಾನಿ ಹಾಗೂ ಸ್ವಾತಂತ್ರ್ಯ ಸೇನಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜಯಂತಿ
‘ಮಕ್ಕಳ ದಿನಾಚರಣೆ’ ಯ ಶುಭಾಶಯಗಳು
... See MoreSee Less

View on Facebook

ವೈದ್ಯರ ಮುಷ್ಕರ ವಾಪಾಸ್ ಪಡೆಯಲು ಮನವಿ
‘ಬೆಳಗಾವಿಯ ಅಧಿವೇಶನದಲ್ಲಿ ಬಡವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕೆಪಿಎಂಇ - 2017ವಿಧೇಯಕ ಜಾರಿಗೆ ತರಲು ಮುಂದಾಗಿದೆ. ವೈದ್ಯರಿಗೆ ತೊಂದರೆ ಅಥವಾ ಕಿರುಕುಳ ನೀಡಲು ಸರ್ಕಾರ ವಿಧೇಯಕ ರೂಪಿಸಿಲ್ಲ. ವೈದ್ಯರಲ್ಲಿ ಎಲ್ಲರೂ ಕೆಟ್ಟವರಲ್ಲ. ವೈದ್ಯರನ್ನು ನಿಯಂತ್ರಿಸುವ ಉದ್ದೇಶವೂ ನಮಗಿಲ್ಲ. ಹೀಗಾಗಿ ಮುಷ್ಕರ ವಾಪಸ್ ಪಡೆಯಿರಿ’
-ಸಿಎಂ. ಸಿದ್ದರಾಮಯ್ಯ
... See MoreSee Less

View on Facebook

Indian National Congress - Karnataka shared DR. G Parameshwara's post. ... See MoreSee Less

ಮಧುಗಿರಿಯಲ್ಲಿ ನಡೆದ 'ಮನೆಮನೆಗೆ ಕಾಂಗ್ರೆಸ್' ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದೆವು. ಕಾಂಗ್ರೆಸ್ ಕಾರ್ಯಕರ್ತರು ಈ ಅಭಿಯಾನವನ್ನು ಇಲ್ಲಿ ಯಶಸ್ವಿಯಾಗಿಸಿದ್ದಾರೆ. ಮನೆಮನೆಗೆ ಕಾಂಗ್ರೆಸ್ನಲ್ಲಿ ಭಾಗವಹಿಸಿದ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ನಮ್ಮ ಅಭಿನಂದನೆಗಳು. Participated in #ManeManegeCongress booth level committee programme at Madhugiri. Party workers have ensured that the campaign achieves its success here.‬ I congratulate all Congress members involved in #ManeManegeCongress.

View on Facebook

ಅಲೆಮಾರಿಗಳ ಬದುಕಿಗೆ ಸೂಕ್ತ ನೆರವು : ಸಿ.ಎಂ. ಸಿದ್ದರಾಮಯ್ಯ
ಅಲೆಮಾರಿ ಜನಾಂಗವು ಒಂದೆಡೆ ನೆಲೆ ನಿಲ್ಲುವಂತೆ ಮಾಡುಲು ಗ್ರಾಮೀಣ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅವರಿಗೆ ಮನೆಕಟ್ಟಿಕೊಳ್ಳಲು ನಿವೇಶನ ಮತ್ತು ಹಣಕಾಸು ನೆರವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಅಲೆಮಾರಿ ಕುಟುಂಬಗಳು ತಮ್ಮ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣದ ಸೌಲಭ್ಯಗಳನ್ನು ಪಡೆದುಕೊಳ್ಳುವ ಜವಾಬ್ದಾರಿಯನ್ನು ಹೊರಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.
... See MoreSee Less

View on Facebook

ರಾಜ್ಯ ಕಾಂಗ್ರೆಸ್ ಸರ್ಕಾರದ ದಕ್ಷ ಆಡಳಿತದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸದೃಢ ಆರ್ಥಿಕತೆಯನ್ನು ಕಾಣಬಹುದಾಗಿದ್ದು, ನವೋದ್ಯಮ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ಸರಳ ಆರ್ಥಿಕ ನೀತಿಗಳು ಹಾಗೂ ಕುಶಲ ಮಾನವ ಸಂಪನ್ಮೂಲ ಕ್ಷೇತ್ರವನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸತತವಾಗಿ ಎರಡನೇ ಬಾರಿಗೆ ಬಂಡವಾಳ ಹೂಡಿಕೆಯಲ್ಲಿ ಭಾರತದ ನಂ 1 ರಾಜ್ಯ ಎಂಬ ಬಿರುದಿಗೆ ಪಾತ್ರವಾಗಿರುವುದು ಶ್ಲಾಘನೀಯ.

Owing to a positive economic environment, a ready availability of skilled labour and innovative and business friendly policies, for the second year in a row, the State of Karnataka is No. 1 in investment intentions.
... See MoreSee Less

View on Facebook

PCC President Dr G Parmeshwara Press Conference ... See MoreSee Less

View on Facebook

Indian National Congress - Karnataka was live. ... See MoreSee Less

View on Facebook

ಮುಂದಿನ ಶೈಕ್ಷಣಿಕ ವರ್ಷದಿಂದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಕುರಿತಂತೆ 2006 ರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಜೊತೆಗೆ ಕೆಲವು ಮಾರ್ಪಾಡುಗಳ ಒಡಂಬಡಿಕೆಗೆ ರಾಜ್ಯ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

ಖಾಸಗಿ ವೃತ್ತಿಪರ ಕೋರ್ಸುಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಅಧಿನಿಯಮದಂತೆ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದ ಜೊತೆಗೆ ಮಾರ್ಪಾಡು ಮಾಡಿರುವ ನಿಯಮಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿದೆ.

ಚಳಿಗಾಲದ ಅಧಿವೇಶನದಲ್ಲಿ ಕಂಬಳ ವಿಧೇಯಕ ಮಂಡನೆ:

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿರುವ ಕಂಬಳ ಸ್ಪರ್ಧೆಯನ್ನು ಮುಂದುವರೆಸಲು ರಾಜ್ಯ ಸರ್ಕಾರ ತಂದಿದ್ದ ಆಧ್ಯಾದೇಶಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಮುಂದಿನ ತಿಂಗಳಲ್ಲಿ ನಡೆಯಲಿರುವ ಕಂಬಳ ಸ್ಪರ್ಧೆಗೆ ಪೂರಕವಾದ ಶಾಸನ ತರುವ ಹಿನ್ನೆಲೆಯಲ್ಲಿ ಪ್ರಾಣಿಗಳಿಗೆ ಹಿಂಸೆ ಮಾಡುವುದನ್ನು ತಡೆಗಟ್ಟುವ ( ಕರ್ನಾಟಕ ತಿದ್ದುಪಡಿ ) ವಿಧೇಯಕ-2017 ವನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.

ಶ್ರಮ ಸಮರ್ಥ ಯೋಜನೆ:
ರಾಜ್ಯದಲ್ಲಿ 12 ಲಕ್ಷ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿದ್ದಾರೆ. ಪ್ರಸಕ್ತ ವರ್ಷದಲ್ಲಿ ಶ್ರಮ ಸಮರ್ಥ ಯೋಜನೆಯಡಿ 37,440 ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡುವ ಜೊತೆಗೆ 99.88 ಕೋಟಿ ರೂ ವೆಚ್ಚದಲ್ಲಿ ಉಪಕರಣಗಳನ್ನು ವಿತರಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿಗೆ ಸಂಪುಟ ಒಪ್ಪಿಗೆ:

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೈನಿಕ ಶಾಲೆ ನಿರ್ಮಾಣವೂ ಒಳಗೊಂಡಂತೆ 267.67 ಕೋಟಿ ರೂ. ವೆಚ್ಚದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿಗೆ ಪೂರಕವಾದ ಉದ್ದೇಶಿತ ಯೋಜನೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಯನ್ನೂ ಸದಸ್ಯರಾಗಿ ನೇಮಕ ಮಾಡಲು ಅಗತ್ಯ ತಿದ್ದುಪಡಿ ಮಸೂದೆಯನ್ನು ತರಲು ಸಂಪುಟ ಸಮ್ಮತಿ ನೀಡಿದೆ.

ಏಕೀಕೃತ ವಿಶ್ವವಿದ್ಯಾಲಯದ ಕಾಮಗಾರಿಗಳಿಗೆ ಅನುಮೋದನೆ:

ಮಂಡ್ಯದಲ್ಲಿ ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ ಯೋಜನೆಯಡಿ ಅಂತಾರಾಷ್ಟ್ರೀಯ ಮಟ್ಟದ ಏಕೀಕೃತ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಕಟ್ಟಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಂದಾಜು 42 ಕೋಟಿ ರೂ. ಯೋಜನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಉಳ್ಳಾಳದಲ್ಲಿ ಎಂಟು ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಯಾದಗಿರಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಉಚಿತ ನಿವೇಶನ:

ಯಾದಗಿರಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನಿರ್ಮಾಣಕ್ಕಾಗಿ ಯಾದಗಿರಿ ತಾಲ್ಲೂಕಿನ ಯಾದಗಿರಿ ಬಿ. ಗ್ರಾಮದಲ್ಲಿ 10 ಎಕರೆ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ಸಂಪುಟ ಸಮ್ಮತಿಸಿದೆ.

ಒಂದು ಲಕ್ಷ ಮನೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ:

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ 431.11 ಎಕರೆ ಸರ್ಕಾರಿ ಗೋಮಾಳ ಹಾಗೂ ಖರಾಬು ಜಮೀನುಗಳಲ್ಲಿ ಬಹು ಮಹಡಿ ವಸತಿ ಯೋಜನೆಯಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಿ ಕಡುಬಡವರಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಿ ಕೊಡಲು ಸಂಪುಟ ಒಪ್ಪಿಗೆ ನೀಡಿದೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕಕ್ಕೆ ತಾತ್ವಿಕ ಒಪ್ಪಿಗೆ:

ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕಕ್ಕೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿಯವರ ಪರಾಮರ್ಶೆಯ ನಂತರ ಸದನದಲ್ಲಿ ಮಂಡಿಸಲು ಸಚಿವ ಸಂಪುಟ ಸಮ್ಮತಿಸಿದೆ.
ಬುಯ್ಯಾರ್ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅನುಮೋದನೆ
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬುಯ್ಯಾರ್ ಮತ್ತು ಇತರ 11 ಗ್ರಾಮಗಳಿಗೆ ಸಂಬಂಧಿಸಿದಂತೆ 36.06 ಕೋಟಿ ರೂ. ಪರಿಷ್ಕøತ ಅಂದಾಜಿನ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಅಮರಾವತಿ ಗ್ರಾಮದಲ್ಲಿ ಟ್ರಕ್ ಟರ್ಮಿನಲ್:

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಅಮರಾವತಿ ಗ್ರಾಮದಲ್ಲಿ 37.82 ಎಕರೆ ಜಮೀನಿನಲ್ಲಿ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಸಂಸ್ಥೆ ವತಿಯಿಂದ 33.55 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

2018 ರ ದಿನದರ್ಶೀ ವರ್ಷದಲ್ಲಿ ಸರ್ಕಾರಿ ರಜಾ ದಿನಗಳು:

2018 ನೇ ಸಾಲಿನ ದಿನದರ್ಶೀ ವರ್ಷದಲ್ಲಿ 23 ಸಾರ್ವತ್ರಿಕ ರಜೆಗಳನ್ನು ವಿದ್ಯುಕ್ತವಾಗಿ ಘೋಷಣೆ ಮಾಡುವ ನಿರ್ಣಯಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿದೆ.

ಮೈಸೂರು ಕಾಗದ ಕಾರ್ಖಾನೆ ಸರ್ಕಾರದ ವಶದಲ್ಲೇ ಮುಂದುವರೆಯಲಿದೆ
ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯ ಖಾಯಂ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ ಹಾಗೂ ಗುತ್ತಿಗೆ ನೌಕರರರಿಗೆ ಸ್ವಯಂ ಪ್ರತಿಕಿರಣ ಯೋಜನೆಗೆ ಸಂಪುಟ ಅನುಮತಿ ನೀಡಿದೆ.

ಈ ಕಾರ್ಖಾನೆಯಲ್ಲಿರುವ ದಾಸ್ತಾನನ್ನು ಮಾರಾಟ ಮಾಡಿ ಪರಿಹಾರ ನೀಡಲು ಹಾಗೂ ಕಾರ್ಖಾನೆಯನ್ನು ಸರ್ಕಾರದ ವಶದಲ್ಲೇ ಮುಂದುವರೆಸಲು ಸಂಪುಟ ನಿರ್ಧರಿಸಿದೆ.

ಕಂದಾಯ ಗ್ರಾಮಗಳಾಗಿ ಘೋಷಿಸಲು ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ
ರಾಜ್ಯದಲ್ಲಿ ಲಂಬಾಣಿ ತಾಂಡಾ, ಗೊಲ್ಲರ ಹಟ್ಟಿ ಇನ್ನಿತರೆ ದಾಖಲೆ-ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಅನುವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ ಪರಿಚ್ಚೇಧ 94 ( ಡಿ ) ಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ

ಹುಳಿಯಾರ್ ಇನ್ನು ಪಟ್ಟಣ ಪಂಚಾಯಿತಿ :

ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಹುಳಿಯಾರ್ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಪರಿವರ್ತಿಸಲು ಸಂಪುಟ ಅನುಮೋದಿಸಿದೆ.
ಮೈಸೂರಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಸ್ಥಾಪಿಸಲಿರುವ ಸೆಂಟರ್ ಆಫ್ ಎಕ್ಸೆಲೆನ್ಸ್‍ನಲ್ಲಿ ಕಟ್ಟಡ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ 48.6 ಕೋಟಿ ಅಂದಾಜು ವೆಚ್ಚಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಕೇಂದ್ರದಲ್ಲಿ ವಾರ್ಷಿಕವಾಗಿ 300 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಜಯಚಂದ್ರ ಅವರು ಹೇಳಿದರು.
... See MoreSee Less

View on Facebook

‘ನಮ್ಮದು ಸಾಧನಾ ಪರ್ವ. ನಾವು ಕೊಟ್ಟಿರುವ ಜನಪರ ಆಡಳಿತ ನಮ್ಮ ಬೆನ್ನಿಗಿರುವಾಗ ಗೆಲುವಿನ ಆತಂಕವಿಲ್ಲ’


ಮೈಸೂರಿನ ಆಂದೋಲನ ಪತ್ರಿಕೆಗೆ ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ ಖಚಿತ ಮಾತುಗಳಿವು.ಸಿಎಂ ಖಡಕ್ ಮಾತು
ಬಿಜೆಪಿ ಪರಿವರ್ತನಾ ಯಾತ್ರೆ ಹೆಸರಿನಲ್ಲಿ, ಜಾ.ದಳ ಕುಮಾರ ಪರ್ವ ಹೆಸರಿನಲ್ಲಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿವೆ. ಇದರಿಂದ ಸಿಎಂ ವಿಚಲಿತರಾಗಿಲ್ಲ. ‘ಪಾಪ, ಅವರು ಯಾತ್ರೆ ಯಾದರೂ ಮಾಡಲಿ, ಕುಮಾರ ಪರ್ವವನ್ನಾದರೂ ಮಾಡಲಿ. ನಮಗೆ ನಾವು ಕೊಟ್ಟಿರುವ ಜನಪರ ಆಡಳಿತ ಹಾಗೂ ಜಾರಿಗೊಳಿಸಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಬೆನ್ನಿಗಿವೆ. ಎಂದು ಭರವಸೆ ವ್ಯಕ್ತಪಡಿಸಿದರು.


ಬಿಜೆಪಿಯವರೇನು ಪರಿವರ್ತನೆಮಾಡೋದು, ಅವರೇ ಪರಿವರ್ತನೆ ಆಗಬೇಕಿದೆ;ಕೋಮುವಾದಿಗಳಾಗಿರುವ ಬಿಜೆಪಿಯವರು ಜಾತ್ಯತೀತರಾಗಿ ಪರಿವರ್ತನೆ ಆಗಬೇಕಿದೆ.ಇನ್ನು ಜಾ.ದಳ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಮಾಲೋಕದಲ್ಲಿ ವಿಹರಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂದು ಕಾಣುತ್ತಿರುವ ಕನಸು ನನಸಾಗದು.

ಅಹಿಂದ ಎಂದರೆ ಸಮಾಜದಲ್ಲಿ ಅವಕಾಶವಂಚಿತರಾದವರು.ಆದರೆ, ನಮ್ಮ ಎಲ್ಲಾ ಕಾರ್ಯಕ್ರಮಗಳು ಕೇವಲ ಅಹಿಂದ ವರ್ಗದವರಿಗೇ ಮಾಡಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಕೊಡುವ ಹಾಲು, ರೈತರ ಸಾಲ ಮನ್ನಾ,ಕೃಷಿಭಾಗ್ಯ, ಅನ್ನಭಾಗ್ಯ ಹೀಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಈ ಯೋಜನೆಗಳೇನು ಬರೀ ಅಹಿಂದ ವರ್ಗದವರಿಗೆ ಮೀಸಲಾಗಿವೆಯೇ?

ಕಾಂಗ್ರೆಸ್ ಗೆಲುವಿನ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನೋಡಿ ರಾಜ್ಯದ ಜನರು ಇನ್ನೊಂದು ಅವಕಾಶ ಖಂಡಿತವಾಗಿಯೂ ಕಲ್ಪಿಸಿಕೊಡುತ್ತಾರೆ.ನಾವು ಜಾರಿಗೊಳಿಸಿರುವ ಕಾರ್ಯಕಮಗಳು ಕೂಡ ಜನರನ್ನು ತಲುಪಿವೆ. ಶೇ90 ರಷ್ಟು ಕನ್ನಡಿಗರಿಗೆ ನಮ್ಮ ಸರ್ಕಾರದಿಂದ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಇವೆಲ್ಲಾ ನಮ್ಮ ಗೆಲುವಿಗೆ ಪೂರಕವಾಗಲಿದೆ.
... See MoreSee Less

View on Facebook

ಮುಖ್ಯಮಂತ್ರಿಗಳಿಂದ 1064 ಕೋಟಿಯಷ್ಟು ರೈತರ ಸಾಲಮನ್ನಾ ಅನುದಾನ ಬಿಡುಗಡೆ

ರೈತರ ಪರವಾಗಿ ನುಡಿದಂತೆ ನಡೆಯುತ್ತಿರುವ ಕರ್ನಾಟಕ ಸರ್ಕಾರವು ಮೊದಲ ಹಂತದಲ್ಲಿ 1064 ಕೋಟಿಗಳ ಸಾಲ ಮನ್ನಾ ಘೋಷಣೆಯ ಹಣವನ್ನು ಬಿಡುಗಡೆ ಮಾಡಿದೆ. ಆ ಮೂಲಕ ಸಿದ್ದರಾಮಯ್ಯನವರ ಸರ್ಕಾರವು ನುಡಿದಂತೆ ನಡೆದ ಮತ್ತು ರೈತರ ಪರವಾದ ಸರ್ಕಾರವೆಂದು ಸಾಬೀತು ಪಡಿಸಿದೆ. ಈ ಸಾಲಮನ್ನಾ ಯೋಜನೆಯಡಿಯಲ್ಲಿ ಮೊದಲ ಹಂತದ ಬಿಡುಗಡೆಯಲ್ಲಿ 3,27,018 ರೈತರು ಫಲಾನುಭವಿಗಳಾಗಿದ್ದು ಇದೊಂದು ರಾಜ್ಯ ಸರ್ಕಾರದ ಜನಪರ ಯೋಜನೆಯಾಗಿರುವುದು ಸತ್ಯವಾಗಿದೆ.
... See MoreSee Less

View on Facebook

ಸರ್ವರಿಗೂ ಟಿಪ್ಪು ಜಯಂತಿಯ ಹಾರ್ದಿಕ ಶುಭಾಶಯಗಳು ... See MoreSee Less

View on Facebook

ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳಿಗೆ ಸಿಎಂ ಖಡಕ್ ಸೂಚನೆ
ಕುಡಿಯುವ ನೀರು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಗಳು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ನಿಗಾ ವಹಿಸಬೇಕು.
ರಾಜ್ಯದ 6ಸಾವಿರ ಪಂಚಾಯತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಿದ್ದು, 514 ಕಾರ್ಯಾರಂಭ ಮಾಡಿವೆ. ಉಳಿದೆಡೆ 2 ತಿಂಗಳಲ್ಲಿ ತೆರೆಯಬೇಕು.

ಗರ್ಭಿಣಿಯರು ಹಾಗೂ ಬಾಣಂತಿಯವರಿಗೆ ಪೌಷ್ಠಿಕ ಆಹಾರ ಒದಗಿಸುವ ಮಾತೃಪೂರ್ಣ ಯೋಜನೆ ಜಾರಿಗೆ ಕಾಳಜಿ ವಹಿಸಿ, ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ ವಿತರಿಸಿ.

ರಾಜ್ಯದಲ್ಲಿ 55 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ನೀಡಿದ್ದು 32 ಲಕ್ಷ ನಿರ್ಮಾಣವಾಗಿವೆ. ಉಳಿದವುಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ಬಸ್ ನಿಲ್ದಾಣ, ಆಸ್ಪತ್ರೆ, ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಆವರಣ ಸೇರಿದಂತೆ ಜನಸಂದಣಿಯ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಜಾಗ ಗುರುತಿಸಿ.
ಸರ್ಕಾರದ ಆಸ್ತಿ ರಕ್ಷಣೆ ಮಾಡುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಸಹ ಆಗಿದೆ. ಜಿಲ್ಲಾಧಿಕಾರಿಗಳು ಆ ಕಾರ್ಯ ಮಾಡದೇ ಇದ್ದರೆ ಕರ್ತವ್ಯಲೋಪವಾಗುತ್ತದೆ.
... See MoreSee Less

View on Facebook

Like Us on TwitterDeath Anniversary of Smt. Indira Gandhi
Death Anniversary of Smt. Indira Gandhi

CM Siddaramaiah addressing Press Conference at KPCC HQ on the occasion of the Death Anniversary of Smt. Indira Gandhi